
Sri Ramana Maharshi Mattu Atmajnanada Marga (Kannada)
Non-returnable
Rs.150.00
Out of stock
Product Details
Original in English: Ramana Maharshi and the Path of Self Knowledge by Arthur Osborne
ಭಗವಾನ್ ಶ್ರೀರಮಣ ಮಹರ್ಷಿಗಳು 1879ರಲ್ಲಿ ಜನಿಸಿದರು. ತಮ್ಮ ಹದಿನೇಳನೇ ವಯಸ್ಸಿಿನಲ್ಲಿ ಪರಿಪೂರ್ಣ ಪ್ರಜ್ಞಾಾಯುತ ಸ್ಥಿಿತಿಯಲ್ಲಿರುವಾಗಲೇ ಭೌತಿಕ ದೇಹವು ಸಾಯುತ್ತಿಿರುವುದೋ ಎಂಬಂಥ ವಿಚಿತ್ರವಾದ ಅನುಭವದ ಮೂಲಕವಾಗಿ ಅವರು ಆತ್ಮಜ್ಞಾಾನವನ್ನು ಪಡೆದರು. ಈ ಪರಿವರ್ತನೆಯ ನಂತರ ತಮ್ಮ ಮನೆಯನ್ನು ತ್ಯಜಿಸಿ ಪಾವನಗಿರಿಯಾದ ಅರುಣಾಚಲದ ಕಡೆಗೆ ಅದಮನೀಯವಾಗಿ ಆಕರ್ಷಿತರಾದರು. ಎಂದೆಂದಿಗೂ ಅವರು ಅಲ್ಲಿಂದ ಕದಲಲಿಲ್ಲ. ತಮ್ಮ ಸುತ್ತುಮುತ್ತಲೂ ಬೆಳೆದುನಿಂತ ಆಶ್ರಮದಲ್ಲಿ ಅವರು ಆತ್ಮ ವಿಚಾರದ ತೀರಾ ಸರಳವಾದ ಸಾಧನೆಯ ಮೂಲಕವಾಗಿ ಪರಿಶುದ್ಧ ಅದ್ವೈತ ವೇದಾಂತವನ್ನು ಬೋಸಿದರು.

